| ಪವಮಾನ ಶಕ್ತಿಯು ಸ್ವಾಭಾವಿಕವಾದ ಶಕ್ತಿಯಾಗಿದ್ದು, ಎಲ್ಲಿ 
                            ಗಾಳಿಯು ಸೆಕೆಂಡಿಗೆ 12 ಮೈಲಿ ವೇಗದಲ್ಲಿ ಬೀಸುತ್ತದೋ ಅಲ್ಲಿ 
                            ಪವಮಾನ ಶಕ್ತಿ ಉತ್ಪಾದಿಸಬಹುದಾಗಿದೆ. ಪವಮಾನ ಶಕ್ತಿಯು ಮಾಲಿನ್ಯ 
                            ಮುಕ್ತವಾಗಿದ್ದು ಇದರಲ್ಲಿ ಯಾವುದೇ ರೀತಿಯ ಅರಣ್ಯನಾಶ/ 
                            ಮೌಲ್ಯಯುತ ಭೂಮುಳುಗಡೆ ಇರುವುದಿಲ್ಲ. ಜೀವಸಂಕುಲ ಮತ್ತು 
                            ಸಸ್ಯಸಂಕುಲಗಳಿಗೆ ಯಾವುದೇ ರೀತಿಯ ಉಪದ್ರವವೂ ಆಗುವುದಿಲ್ಲ. ಈ 
                            ಯೋಜನೆಗಳ ಜಾರಿಗೆ ತಗಲುವ ಧಾರಣಾ ಸಮಯ ಸಹ ಅಲ್ಪ. ಜೊತೆಗೆ 
                            ಸಾಂಪ್ರದಾಯಿಕ ವಿದ್ಯುತ್ ಯೋಜನೆಗಳೊಂದಿಗೆ ಪವಮಾನ ಶಕ್ತಿ 
                            ಯೋಜನೆಗಳ ವೆಚ್ಚವನ್ನು ತುಲನೆಮಾಡಬಹುದಾಗಿದೆ.
 
 ಪವಮಾನ ಶಕ್ತಿ ಯೋಜನೆಗಳ ಪರಿಮಿತಿ:
 
                                ಗಾಳಿ ಬೀಸುವ ದಿಕ್ಕು ಮತ್ತು ವೇಗಕ್ಕೆ 
                                ಅವಲಂಬಿತವಾಗಿರುತ್ತದೆ.ಉತ್ಪಾದಿಸಿದ ಶಕ್ತಿಯನ್ನು ಸಂಗ್ರಹಿಸಿಡಲೇಬೇಕು.   |